ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಒಡೆಯನಿಗೆ ಸಹಾಯ ಮಾಡಿದೆ ಎಂಬ ಅನುಮಾನದ ಮೇಲೆ ನೆದರ್ಲೆಂಡ್ ಪೊಲೀಸರು ಹಕ್ಕಿಯೊಂದನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸ್ವತ: ಪೊಲೀಸರೇ ಮಾಹಿತಿ
ನೀಡಿದ್ದು, ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಂಗಡಿ ಕಳ್ಳತನ ಮಾಡಿದ
ವ್ಯಕ್ತಿಯನ್ನು ಬಂಧಿಸಿದಾಗ ಹಕ್ಕಿ ಮಾಲೀಕನ
ಹೆಗಲ ಮೇಲೆ ಕುಳಿತುಕೊಂಡಿತ್ತು. ಹೀಗಾಗಿ ನಾವು ಅದನ್ನು ವಶಕ್ಕೆ ಪಡೆದು ಬ್ರೆಡ್ ಹಾಗೂ ನೀರು
ಕೊಟ್ಟು ಉಪಚರಿಸಿದೆವು. ಈ ಬಗ್ಗೆ ಕಳ್ಳನನ್ನು ವಿಚಾರಿಸಿದರೆ ಹಕ್ಕಿ ಕಳ್ಳತನಕ್ಕೆ ಸಹಾಯ
ಮಾಡುತ್ತಿತ್ತು ಅನ್ನುವುದು ಗೊತ್ತಾಗಿದೆ.
ಇದೀಗ ಕಳ್ಳ ಹಾಗೂ ಹಕ್ಕಿಯನ್ನು ಬಿಡುಗಡೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
Discussion about this post