ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಚಿನ್ನ ಸಾಗಿಸಲು ದುಷ್ಕರ್ಮಿಗಳು ಇನ್ನಿಲ್ಲದ ಮಾರ್ಗಗಳನ್ನು ಹುಡುಕಾಡುತ್ತಿದ್ದಾರೆ. ಮುಂಚೆ ಶೂ, ಸಾಕ್ಸ್ ಎಂದು ವಿವಿಧ ರೀತಿಯಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿದ್ರೆ, ಈಗ ಅವೆಲ್ಲಾ ಕಷ್ಟ ಅನ್ನುವ ಕಾರಣಕ್ಕೆ ದೇಹದ ವಿವಿಧ ಭಾಗಗಳಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ.
ಹೀಗೆ ಗುದನಾಳದಲ್ಲಿ ಚಿನ್ನ ಸಾಗಿಸುತ್ತಿದ್ದ ಖದೀಮರನ್ನು ಚೆನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಒಟ್ಟು 17 ಮಂದಿ ಚಿನ್ನ ಸಾಗಿಸುತ್ತಿದ್ದಾರೆ ಅನ್ನುವ ಖಚಿತ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ 9 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಗುದನಾಳದಲ್ಲಿ ಬಚ್ಚಿಟ್ಟು ತಂದ ಚಿನ್ನದ ಮೌಲ್ಯ 4.5 ಕೋಟಿ ಎಂದು ಅಂದಾಜಿಸಲಾಗಿದ್ದು, 9 ಮಂದಿಯಿಂದ ಒಟ್ಟು 9 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಈಗ ಕಸ್ಟಮ್ ಅಧಿಕಾರಿಗಳ ಕಣ್ಣು ಗುದದ್ವಾರಕ್ಕೂ ಬಿದ್ದಿದೆ. ಹೀಗಾಗಿ ಖದೀಮರು ಮತ್ಯಾವ ಮಾರ್ಗ ಹುಡುಕುತ್ತಾರೋ ಗೊತ್ತಿಲ್ಲ.
Discussion about this post