ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕವಾದ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ನ್ಯುಜಿಲೆಂಡ್ ನಡುವೆ ನಡೆದ ಪಂದ್ಯ ಸಾಕ್ಷಿಯಾಗಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಿಥೇ ಇಂಗ್ಲೆಂಡ್ ಗೆಲುವು ಸಾಧಿಸಿ ಕಪ್ ಗೆ ಮುತ್ತಿಕ್ಕಿತ್ತು.
ಈ ವಿಜಯದ ದಿನಕ್ಕೆ ಇದೀಗ ಎರಡು ವರ್ಷದ ಸಂಭ್ರಮ. ಲಾರ್ಡ್ಸ್ ಮೈದಾನದಲ್ಲಿ ಇದೇ ದಿನ ಅಂದರರೆ ಎರಡು ವರ್ಷಗಳ ಹಿಂದೆ ಚೊಚ್ಚಲ ಬಾರಿಗೆ ವಿಶ್ವಕಪ್ ಸಾಮ್ರಾಟನಾಗಿ ಮೆರೆದಾಡಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಗಳ ಗುರಿಯನ್ನು ನೀಡಿತ್ತು. 241 ರನ್ ಗುರಿಯನ್ನು ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ 241 ರನ್ ಗುರಿ ತಲುಪುವ ಹೊತ್ತಿಗೆ ಆಲೌಟ್ ಆಯ್ತು. ಹೀಗಾಗಿ ಸೂಪರ್ ಓವರ್ ಪರಿಸ್ಥಿತಿ ನಿರ್ಮಾಣವಾಯ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಒಂದು ಓವರ್ ನಲ್ಲಿ 15 ರನ್ ಬಾರಿಸಿತ್ತು. ಗೆಲ್ಲಬೇಕಾದರೆ 16 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ಕಿವೀಸ್ ಪಡೆ 15 ರನ್ ಬಾರಿಸಿತು. ಹೀಗಾಗಿ ಸೂಪರ್ ಓವರ್ ಪಂದ್ಯ ಕೂಡಾ ಟೈ ಆಯ್ತು.
ಈ ವೇಳೆ ಮೊದಲ ಇನ್ನಿಂಗ್ಸ್ ನಲ್ಲಿ ಗರಿಷ್ಟ ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯ್ತು.
Discussion about this post