ಕಾರವಾರ : ಪಾಕಿಸ್ತಾನ ಅಕ್ರಮವಾಗಿ ಭಾರತಕ್ಕೆ ನುಸುಳಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಾಸವಿದ್ದ ಮಹಿಳೆಯನ್ನು ರಾಜ್ಯ ಗುಪ್ತಚರ ಇಲಾಖೆಯ ಪೊಲೀಸರು ಜಿಲ್ಲಾ ಪೊಲೀಸರ ಸಹಕಾರದಿಂದ ಬಂಧಿಸಿದ್ದಾರೆ.
ಬುಧವಾರ ರಾತ್ರಿ ಈ ಕಾರ್ಯಾಚರಣೆ ನಡೆದಿದ್ದು ಬಂಧಿತಳನ್ನು 32 ವರ್ಷದ ಖತೀಜಾ ಮೆಹರಿನ್ ಎಂದು ಗುರುತಿಸಲಾಗಿದೆ. ಭಟ್ಕಳದ ನವಾಯತ್ ಕಾಲೋನಿ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬಾತನನ್ನು ಮದುವೆಯಾಗಿದ್ದ ಈಕೆ ಪಾಕಿಸ್ತಾನದ ಪೌರತ್ವವನ್ನೂ ಹೊಂದಿದ್ದಳು

ದುಬೈ ನಲ್ಲಿ ಜಾವೀದ್ ನನ್ನು ಮದುವೆಯಾಗಿದ್ದ ಈಕೆ 2013ರಲ್ಲಿ ವಿಸಿಟಿಂಗ್ ವೀಸಾ ಮೂಲಕ ಭಾರತಕ್ಕೆ ಬಂದಿದ್ದ ಈಕೆ ಮೇಯಿಂದ ಜುಲೈ ತನಕ ವಾಸವಿದ್ದು ಬಳಿಕ ಹಿಂತಿರುಗಿದ್ದಳು. ಇದಾದ ಬಳಿಕ 2015ರಲ್ಲಿ ನೇಪಾಳ ಗಡಿ ಮೂಲಕ ಕಳ್ಳಮಾರ್ಗದಲ್ಲಿ ಭಾರತತ್ತೆ ನುಸುಳಿದ್ದ ಈಕೆ ಭಟ್ಕಳದಲ್ಲಿ ಸಂಸಾರ ಪ್ರಾರಂಭಿಸಿದ್ದಳು. ಬಳಿಕ ಈ ದಂಪತಿ ಮೂರು ಮಕ್ಕಳಾಗಿತ್ತು.
ದುರಂತ ಅಂದ್ರೆ ಪಾಕ್ ಮಹಿಳಾ ಪ್ರಜೆ ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹೀಗೆ ಯಾವುದೆಲ್ಲಾ ದಾಖಲೆಗಳು ಬೇಕೋ ಅವೆಲ್ಲವನ್ನೂ ಪಡೆದಿದ್ದಳು. ಈಕೆಗೆ ಅಷ್ಟೆಲ್ಲಾ ದಾಖಲೆಗಳನ್ನು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಮೊದಲು ದೇಶದ್ರೋಹದ ಪ್ರಕರಣ ದಾಖಲಿಸಬೇಕು.

Discussion about this post