ಪ್ರಧಾನಿ ಸೇರಿದಂತೆ ಅತೀ ಗಣ್ಯರು ಪ್ರಯಾಣಿಸುವ ವಿಮಾನ ತಾಂತ್ರಿಕ ಕಾರಣ ಅಥವಾ ಇಂಧನ ತುಂಬುವ ಸಂದರ್ಭದಲ್ಲಿ ಭೂಸ್ಪರ್ಶ ಮಾಡಿದಾಗ ಪ್ರಧಾನಿ ಹಾಗೂ ಅವರ ನಿಯೋಗವನ್ನು ಫೈವ್ ಸ್ಟಾರ್ ಹೊಟೇಲ್ಗಳಲ್ಲಿ ಇರಿಸಲಾಗುತ್ತದೆ. ಇದು ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗುತ್ತಿತ್ತು.
Offer : Buy Kids Footwear starting from Rs.199
ಆದರೆ ಇದನ್ನು ಅರಿತುಕೊಂಡ ಪ್ರಧಾನಿ ನರೇಂದ್ರ ಮೋದಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿದೇಶ ಪ್ರಯಾಣದ ವೇಳೆ ತಾಂತ್ರಿಕ ಕಾರಣದಿಂದ ವಿಮಾನ ಭೂ ಸ್ಪರ್ಶ ಮಾಡಿದರೆ ಅವರು ಐಷಾರಾಮಿ ಹೋಟೆಲ್ ಬದಲು ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿಯೇ ಸ್ನಾನ ಮಾಡುತ್ತಿದ್ದರು ಅನ್ನುವ ಅಂಶ ಬೆಳಕಿಗೆ ಬಂದಿದೆ.
Offer : Buy Womens Handbags starting from Rs.147
ಈ ಮಾಹಿತಿಯನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ.ಈ ಮುಂಚೆ ಪ್ರಧಾನಿಗಳು ವಿದೇಶಕ್ಕೆ ಪ್ರಯಾಣಿಸಿದಾಗ ತಾಂತ್ರಿಕ ಕಾರಣದಿಂದ ರಾತ್ರಿ ಹೋಟೆಲ್ ಬುಕ್ ಮಾಡಲಾಗುತ್ತಿತ್ತು. ಆದರೆ, ನರೇಂದ್ರ ಮೋದಿ ಈವರೆಗೂ ಹೋಟೆಲ್ ಬುಕ್ ಮಾಡಿಲ್ಲ. ವಿಮಾನ ನಿಲ್ದಾಣದಲ್ಲೇ ತಂಗುತ್ತಿದ್ದ ಅವರು ಇಂಧನ ಹಾಕಿದ ಬಳಿಕ ಹೊರಡುತ್ತಿದ್ದರು ಮಾತ್ರವಲ್ಲದೆ ಅವರ ಜೊತೆಗಿರುವ ಸಿಬ್ಬಂದಿಗೂ ಹೋಟೆಲ್ ವ್ಯವಸ್ಥೆ ಮಾಡಲಾಗುತ್ತಿರಲಿಲ್ಲ ಅಂದಿದ್ದಾರೆ.
Discussion about this post