ನಿರ್ದೇಶಕ ಸೂರಿಯವರ ಮಹಾತ್ವಾಕಾಂಕ್ಷೆಯ ಚಿತ್ರವೊಂದು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ದುನಿಯಾ ಸೂರಿ ನಿರ್ದೇಶನದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಬುಧವಾರ, ಅ.30 ರಂದು ಆಕಾಶ್ ಸ್ಟುಡಿಯೋದಲ್ಲಿ ತನ್ನ ಡಬ್ಬಿಂಗ್ ಕಾರ್ಯವನ್ನು ಆರಂಭಿಸಿದೆ.
ಆಕಾಶ್ ಸ್ಟುಡಿಯೋದಲ್ಲಿ ಧನಂಜಯ್ ಸಿನಿಮಾ ಡಬ್ಬಿಂಗ್ ಶುರು ಮಾಡಿದೆ. ಚಿತ್ರದ ನಾಯಕಿಯರು ಹಾಗೂ ನಿರ್ದೇಶಕ ಸೂರಿ ಡಬ್ಬಿಂಗ್ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ದುನಿಯಾ ಸೂರಿಯ ಮಹಾತ್ವಾಕಾಂಕ್ಷೆಯ ಪಾಪ್ ಕಾರ್ನ್ ಮಂಕಿ ಟೈಗರ್ ಡಬ್ಬಿಂಗ್ ಶುರು, ಭಿನ್ನ ಶೀರ್ಷಿಕೆಯ ಚಿತ್ರದ ಟೀಸರ್ ಶೀಘ್ರದಲ್ಲಿ ರಿಲೀಸ್
ಪಾಪ್ ಕಾರ್ನ್ ಚಿತ್ರವು ಒಂದು ಸಾಹಸ ಪ್ರಧಾನ ಮತ್ತು ರೋಚಕ ಕಥಾಹಂದರವನ್ನು ಹೊಂದಿದೆ. ದನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಪ್ ಕಾರ್ನ್ ಚಿತ್ರದ ಕಥೆಯು ಟಗರು ಚಿತ್ರಕ್ಕಿಂತಲೂ ಮೊದಲೇ ತಯಾರಾಗಿದೆ. ಇದು ಒಂದು ನೈಜ ಕಥಾನಕವನ್ನು ಹೊಂದಿದ್ದು ಚಿತ್ರ ಸೆಟ್ಟೇರುವ ಹಿಂದೆಯೂ ಹಲವು ಕುತೂಹಲದ ಕಥೆಗಳಿವೆ. ಸೂರಿ ಇದನ್ನು ಬಹಳ ಶ್ರಮ ವಹಿಸಿ ಇದನ್ನು ತೆಗೆದುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಓಡಾಡುತ್ತಿರುವ ಈ ಪಾಪ್ ಕಾರ್ನ್ ಈಗ ಬಿಡುಗಡೆಯ ಹಂತದವರೆಗೂ ಬಂದಿದೆ.
ದುನಿಯಾ ಸೂರಿಯ ಬಹು ನಿರೀಕ್ಷಿತ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ಡಬ್ಬಿಂಗ್ ಪ್ರಾರಂಭ, ಶೀಘ್ರದಲ್ಲೇ ಟೀಸರ್ ಮೂಲಕ ಅಬ್ಬರಿಸಲಿದೆ ಚಿತ್ರ
ಪಾಪ್ ಕಾರ್ನ್ ಚಿತ್ರಕ್ಕೆ ಸುಧೀರ್ ಕೆ ಎಂ ಬಂಡವಾಳ ಹೂಡಿದ್ದಾರೆ. ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಪಾಪ್ ಕಾರ್ನ್ ಅವರಿಗೆ ಚೊಚ್ಚಲ ಸಿನಿಮಾ. ಶೇಖರ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ದೀಪು ಎಸ್ ಕುಮಾರ್ ಚಿತ್ರದ ಸಂಕಲನ ನೋಡಿಕೊಂಡಿದ್ದಾರೆ. ಚರಣ್ ರಾಜ್ ರಾಗ ಸಂಯೋಜಿಸಿದ್ದಾರೆ.
ದುನಿಯಾ ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್, ನಿವೇದಿತಾ, ಅಮೃತಾ, ಸಪ್ತಮಿ ಮೊದಲಾದವರು ನಟಿಸಿದ್ದಾರೆ.
ಪಾಪ್ ಕಾರ್ನ್ ಚಿತ್ರವು ಆದಷ್ಟು ಬೇಗ ತನ್ನ ಡಬ್ಬಿಂಗ್ ಕಾರ್ಯವನ್ನು ಪೂರ್ಣಗೊಳಿಸಿಕೊಂಡು ನವೆಂಬರ್ ನಲ್ಲಿ ತೆರೆಗೆ ಬರುವ ನಿರೀಕ್ಷೆಯಲ್ಲಿದೆ.
Discussion about this post