crossorigin="anonymous"> ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥ ಅವರಿಗೆ ಎಡಪಂಥೀಯ ಸಂಘಟನೆಗಳೇ ಹೆಚ್ಚು ಮೈಲೇಜ್ ತಂದುಕೊಡುತ್ತಿದೆ

Radhakrishna Anegundi by Radhakrishna Anegundi
25-06-22, 5 : 52 am
in ದಕ್ಷಿಣ ಕನ್ನಡ
rohith left
Share on FacebookShare on TwitterWhatsAppTelegram

ಮಂಗಳೂರು : ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಕಾರದೊಂದಿಗೆ ಚಿಂತನ ಗಂಗಾ ಅನ್ನುವ ಸಂಘಟನೆ ಸಾಹಿತಿ ಚಿಂತಕ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದೆ.

ಮಂಗಳೂರು ಡೊಂಗರಕೇರಿಯ ಕೆನರಾ ಹೈಸ್ಕೂಲ್ ನ ಭುವನೇಂದ್ರ ಹಾಲ್ ನಲ್ಲಿ ಸಂಜೆ 5 ಗಂಟೆಗೆ ಇಂದು ಈ ಕಾರ್ಯಕ್ರಮ ನಡೆಯಲಿದ್ದು,  ಭರತ ಖಂಡದ ಗತ ವೈಭವ ಮತ್ತು ಅಳಿಸಿ ಹೋದ ಇತಿಹಾಸ ಅನ್ನುವ ವಿಚಾರ ಕುರಿತಂತೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಲಿದ್ದಾರೆ.

ಈ ಕಾರ್ಯಕ್ರಮ ಇದೀಗ ಎಡಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆ ಒಕ್ಕೂಟ ನಿರ್ಧರಿಸಿದೆ. ಈ ಸಂಬಂಧ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಭೆಯೊಂದು ಶುಕ್ರವಾರ ನಡೆದಿದ್ದು,  ಸಿಪಿಎಂ ಮುಖಂಡ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜೂನ್ 25 ರ ಸಂಜೆ 4.30ಕ್ಕೆ ಸಿಟಿ ಸೆಂಟರ್ ನಿಂದ ಮೆರವಣಿಗೆ ಹೊರಟು, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಯ್ತು.

dyfi

ನಾರಾಯಣ ಗುರು, ಕಯ್ಯಾರ ಸೇರಿದಂತೆ ಅನೇಕರನ್ನು ಗೌಣಗೊಳಿಸುವಲ್ಲಿ ರೋಹಿತ್ ಚಕ್ರತೀರ್ಥ ಪಾತ್ರವಹಿಸಿದ್ದಾರೆ. ಜೊತೆಗೆ ನಾಡಗೀತೆ ಸೇರಿದಂತೆ ಅನೇಕ ಸಾಹಿತಿಗಳಿಗೆ ಚಕ್ರತೀರ್ಥ ಅವಮಾನ ಮಾಡಿದ್ದಾರೆ ಅನ್ನುವುದು ಎಡಪಂಥೀಯರ ಆರೋಪ.. ಇನ್ನು ನಾರಾಯಣ ಗುರು, ಕುವೆಂಪು, ಅಂಬೇಡ್ಕರ್ ವಿರೋಧಿಯಾಗಿರುವ ಚಕ್ರತೀರ್ಥ ಸನ್ಮಾನದಲ್ಲಿ ಮಂಗಳೂರು ವಿವಿ ಕುಲಪತಿ ಪಾಲ್ಗೊಳ್ಳಬಾರದು ಅನ್ನುವುದು ಈ ಸಂಘಟನೆಯ ಆಗ್ರಹ.

rohit chakrateertha1

ಈ ನಡುವೆ ಸನ್ಮಾನ ಕುರಿತಂತೆ ಪ್ರತಿಕ್ರಿಯಿಸಿರುವ ಸಂಘಟಕರು,  ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವುದು ಅವರ ವೈಯುಕ್ತಿಕ ವಿಚಾರ. ನಾವಂತು ಕಾರ್ಯಕ್ರಮ ಮಾಡುತ್ತೇವೆ ಅಂದಿದ್ದಾರೆ. ಇನ್ನು ಮಂಗಳೂರು ವಿವಿ ಕುಲಪತಿಗಳು, ರೋಹಿತ್ ಚಕ್ರತೀರ್ಥ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ತಾನೇ, ಸಂಘಟನೆಯೊಂದು ನನ್ನನ್ನು ಕಾರ್ಯಕ್ರಮ ಆಹ್ವಾನಿಸಿದೆ.  ನಾನು ರೋಹಿತ್ ಚಕ್ರತೀರ್ಥ ಪರ ಅಥವಾ ವಿರೋಧ ಮಾತನಾಡಲು ಹೋಗುತ್ತಿಲ್ಲ ಅಂದಿದ್ದಾರೆ.

rohit chakrateertha2
Tags: FEATURED
ShareTweetSendShare

Discussion about this post

Related News

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ನಾಳೆಯಿಂದ 6,7,8 ನೇ ತರಗತಿ ಪ್ರಾರಂಭ : ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾದ ಶಾಲೆಗಳು

ಕರಾವಳಿಯಲ್ಲಿ ಮಳೆಯ ಅಬ್ಬರ : ನಾಳೆ ಜುಲೈ 09ಕ್ಕೆ ಶಾಲಾ ಕಾಲೇಜುಗಳಿಗೆ ರಜೆ

Dose Mela in refresh cafe puttur three days

ಪುತ್ತೂರಿನಲ್ಲಿ ದೋಸೆ ಮೇಳ : ಮೂರು ದಿನಗಳ ಕಾಲ ನಡೆಯಲಿದೆ ದೋಸೆ ಜಾತ್ರೆ

ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ಇನ್ನಿಲ್ಲ

ಅರುಣ್ ಪುತ್ತಿಲ ವಿರುದ್ಧ ತೊಡೆ ತಟ್ಟಿದ ಸಂಜೀವ ಮಠಂದೂರು

ಪುತ್ತಿಲ ಬಿಜೆಪಿಗೆ ಬಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಸಂಕಷ್ಟ…?

ಹತ್ತೂರ ಒಡೆಯನ ಸನ್ನಿಧಿಯ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ತಂದ ಅಶೋಕ್ ರೈ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

Yakshagana : ಲೀಲಾವತಿಯವರಿಗೆ leelavathi baipadithaya ಪ್ರಶಸ್ತಿ ಒಲಿದಿದ್ದು ಹೇಗೆ…. ಮಗ ಬಿಚ್ಚಿಟ್ಟ ರಹಸ್ಯ

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್