ನವದೆಹಲಿ : ಪ್ರತೀ ಸಲವೂ ವಿಶೇಷ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಡ್ರೆಸ್ ಗಳ ಮೂಲಕ ಗಮನ ಸೆಳೆಯುತ್ತಾರೆ.
ಅವರು ಧರಿಸುವ ಬಟ್ಟೆ, ಹಾಕುವ ಪೇಟಾ ಎಲ್ಲವೂ ವಿಶೇಷತೆಗಳಿಂದ ಕೂಡಿರುತ್ತದೆ.
ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಹಾಕಿರುವ ಪೇಟ ಎಲ್ಲರ ಗಮನ ಸೆಳೆದಿದೆ.

ಅಂದ ಹಾಗೇ ಇಂದು ಹಾಕಿರುವ ಪೇಟ ಅಂತಿಂತ ಪೇಟವಲ್ಲ, ಗುಜರಾತ್ ರಾಜಮನೆತನವೊಂದು ಮೊಟ್ಟ ಮೊದಲ ಬಾರಿಗೆ ರಾಜಮನೆತನದ ಹೊರಗಿನವರಿಗೆ ಈ ಪೇಟವನ್ನು ನೀಡಿದೆ.
ಗುಜರಾತ್ ನ ಜಮಾ ನಗರಗ ರಾಜಮನೆತದವರು ಧರಿಸುವ ಪೇಟಾ ಇದಾಗಿದ್ದು , ರಾಜ್ ಪಥ್ ನಲ್ಲಿ ನಡೆಯುತ್ತಿರುವ ಗಣ ರಾಜ್ಯ ಪರೇಡ್ ನಲ್ಲಿ ಪೇಟ ತೊಟ್ಟ ಮೋದಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
Discussion about this post