ಸೂಪರ್ ಸ್ಟಾರ್ ರಜನಿಕಾಂತ್ ಇಂದು 69ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಚಂದನವನದ ಅನೇಕ ಮಂದಿ ಶುಭ ಕೋರಿದ್ದಾರೆ.
ದೊಡ್ಮನೆ ಹುಡುಗರು ಸೇರಿದಂತೆ ಸುಮಲತಾ ಅಂಬರೀಶ್, ಸಂತೋಷ್ ಆನಂದರಾಮ್ ಹೀಗೆ ಸಾಲು ಸಾಲು ನಟರು ಶುಭ ಕೋರಿದ್ದಾರೆ.
ರಜನಿಕಾಂತ್ ರಾಜ್ ಕುಮಾರ್ ಕುಟುಂಬದೊಂದಿಗೆ ವಿಶೇಷ ಬಾಂಧವ್ಯವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಬೆಂಗಳೂರಿಗೆ ಬಂದಾಗಲೆಲ್ಲಾ ರಾಜ್ ಕುಟುಂಬದ ಭೇಟಿಯನ್ನು ಮರೆಯುವುದಿಲ್ಲ ಅನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.



Discussion about this post