ಈ ವರ್ಷ ಚಂದನವನದಲ್ಲಿ ಬಿಡುಗಡೆಯಾದ ಸಿನಿಮಾಗಳು ಸಿಕ್ಕಾಪಟ್ಟೆ. ಚಂದನವನದ ಧಾರಣಾ ಶಕ್ತಿಯನ್ನು ಮೀರಿ ಈ ವರ್ಷ ಚಿತ್ರಗಳು ಬಿಡುಗಡೆಯಾಗಿದೆ.
ವಿಪರೀತ ಅನ್ನಿಸುವಷ್ಚು ಚಿತ್ರಗಳು ಬಿಡುಗಡೆಯಾದ ಕಾರಣ ಹಲವು ಚಿತ್ರಗಳು ಅನ್ಯಾಯವಾಗಿ ಸೋಲು ಕಾಣಬೇಕಾಯ್ತು. ಗೆಲ್ಲುತ್ತದೆ ಅಂದುಕೊಂಡಿದ್ದ ಚಿತ್ರಗಳು ಸದ್ದಿಲ್ಲದೆ ಥಿಯೇಟರ್ ನಿಂದ ನಾಪತ್ತೆಯಾಗಿದೆ.
ಹಾಗಾದ್ರೆ ಈ ವರ್ಷ ಬೆಸ್ಟ್ ನಟ ಯಾರು ಎಂದು ಕೇಳಿದ್ರೆ ಆಯ್ಕೆ ಕಷ್ಟ. ಆದರೂ ಒಂದಿಷ್ಟು ಸಿನಿಮಾಗಳನ್ನು ಹೆಕ್ಕಿ ತೆಗೆದು ಪಟ್ಟಿಯನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಸಿನಿ ಪ್ರಿಯರ ನಿರ್ಧಾರ ಇಲ್ಲಿ ಅಂತಿಮವಾಗಿರುವ ಕಾರಣ ಬೆಸ್ಟ್ ನಟನ್ನು ನೀವೇ ಆಯ್ಕೆ ಮಾಡಿ.
- ಪುನೀತ್ ರಾಜ್ ಕುಮಾರ್ – ನಟ ಸಾರ್ವಭೌಮ
- ದರ್ಶನ್ – ಕುರುಕ್ಷೇತ್ರ
- ಉಪೇಂದ್ರ – ಐ ಲವ್ ಯೂ
- ಸುದೀಪ್ – ಪೈಲ್ವಾನ್
- ಶಿವರಾಜ್ ಕುಮಾರ್ – ಕವಚ
- ರಿಷಬ್ ಶೆಟ್ಟಿ – ಬೆಲ್ ಬಾಟಂ
- ರಿಷಿ – ಕವಲು ದಾರಿ
- ಶ್ರೀಮುರಳಿ – ಭರಾಟೆ
- ಜಗ್ಗೇಶ್ – ಕಾಳಿದಾಸ
ಹಾಗೇ ನೋಡಿದರೆ ಈ ಆಯ್ಕೆ ಪರಿಪೂರ್ಣ ಅನ್ನುವುದು ನಮಗೆ ಅರಿವಿದೆ. ಹೀಗಾಗಿ ಬೇರೆ ಹೆಸರುಗಳನ್ನು ಸೇರಿಸಬೇಕಾದರೆ ದಯವಿಟ್ಟು ಕಮೆಂಟ್ ಮಾಡಿ.
Discussion about this post