ಬೆಂಗಳೂರು : 20 ವರ್ಷದ ಪೊಲೀಸ್ ಸೇವೆಯಲ್ಲಿ 42 ಸಲ ವರ್ಗಾವಣೆ ಪಡೆದ ಹಿರಿಮೆ ಐಪಿಎಸ್ ಅಧಿಕಾರಿ ಡಿ. ರೂಪಾ ಅವರದ್ದು.
ಖಾದಿಗಳ ತಾಳಕ್ಕೆ ಸರಿಯಾಗಿ ಕುಣಿಯೋದಿಲ್ಲ ಅನ್ನುವ ಕಾರಣಕ್ಕಾಗಿ ವರ್ಗಾವಣೆ ಪಡೆದ ಖಾಕಿ ಅಧಿಕಾರಿ ವರ್ಗಾವಣೆಯನ್ನು ಎಂದಿಗೂ ಪ್ರಶ್ನಿಸಿದವರಲ್ಲ. ವರ್ಗಾವಣೆ ಆದೇಶ ಪ್ರತಿಯನ್ನು ಶಿಸ್ತಿನಿಂದ ಸ್ವೀಕರಿಸುವ ರೂಪಾ, ಯಾಕೆ ಮೇಡಂ ಹೀಗೆ ಅಂದ್ರೆ ಪೊಲೀಸ್ ಇಲಾಖೆ ಅಂದ್ರೆ ಶಿಸ್ತು ಎಂದು ಸೈಲೆಂಟ್ ಅಗ್ತಾರೆ.
ರೂಪಾ ಅವರು ತುಂಬಾ ಸದ್ದು ಮಾಡಿದ್ದು ಶಶಿಕಲಾ ನಟರಾಜನ್ ಅವರ ಜೈಲು ಹಗರಣದಲ್ಲಿ.
ಈ ಹಿಂದಿನ ಡಿಜಿ ಮತ್ತು ಜೈಲಿನ ಮುಖ್ಯಸ್ಥರು ಸೇರಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದ್ದರು. ಜೈಲಿನ ಅರ್ಧ ಭಾಗವನ್ನು ಶಶಿಕಲಾ ಅವರಿಗೆ ಬಿಟ್ಟು ಕೊಟ್ಟಿದ್ದರು.
ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಶಶಿಕಲಾ ಜೈಲಿನಲ್ಲೇ ತನಗೆ ಬೇಕಾದ ರೀತಿಯಲ್ಲಿ ಅಡುಗೆ ಮಾಡಿಸುತ್ತಿದ್ದರು. ಅಂದ್ರೆ ಶಶಿಕಲಾ ಅಧಿಕಾರಿಗಳಿಗೆ ಅದೆಷ್ಟು ಕೋಟಿ ಸುರಿದಿರಬಹುದು.
ಈ ಎಲ್ಲಾ ವಿಚಾರಗಳ ಕುರಿತಂತೆ ಯೂ ಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿರುವ ರೂಪಾ, ಶಶಿಕಲಾ ಅವರ ರೇಷ್ಮೆ ಸೀರೆ ಬಿಚ್ಚಿಸಿ ಬಿಳಿ ಸೀರೆ ಉಡಿಸಿದ್ದು ನಾನೇ ಅಂದಿದ್ದಾರೆ.
Discussion about this post