ನವದೆಹಲಿ : ಕಠಿಣ ಕಾನೂನುಗಳಿಗೆ ಹೆಸರು ವಾಸಿಯಾಗಿರುವ ಸೌದಿ ಅರೇಬಿಯಾ ಇತ್ತೀಚಿನ ದಿನಗಳಲ್ಲಿ ತನ್ನ ಕೆಲವು ಕಾನೂನುಗಳಿಗೆ ತಿದ್ದುಪಡಿ ತಂದಿದೆ. ಈ ಮೂಲಕ ಹಲವು ಕಠಿಣ ನಿಯಮಗಳು ಒಂದಿಷ್ಟು ಸಾಫ್ಟ್ ಅನ್ನಿಸಿತ್ತು.
ಆದರೆ ಇದೀಗ ವಿವಾಹದ ಕಾನೂನೊಂದನ್ನು ಸೌದಿ ಅರೇಬಿಯಾ ಮತ್ತಷ್ಟು ಕಠಿಣಗೊಳಿಸಿದೆ. ಈ ಮೂಲಕ ಮದುವೆಗಳು ಸ್ಪರ್ಗದಲ್ಲಿ ನಿಶ್ಚಯವಾಗುತ್ತದೆ, ವಿವಾಹಗಳು ಜಾತಿ, ಮತ, ಭಾಷೆ, ರಾಷ್ಟ್ರದ ಗಡಿಗಳನ್ನು ಮೀರಿ ನಡೆಯುತ್ತವೆ ಅನ್ನುವ ಮಾತುಗಳನ್ನು ಸುಳ್ಳು ಮಾಡಲು ಹೊರಟಿದೆ.
ಇನ್ನು ಮುಂದೆ ಸೌದಿಯ ಪುರುಷರು ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಹಾಗೂ ಮ್ಯಾನ್ಮಾರ್ ನ ಮಹಿಳೆಯರನ್ನು ವಿವಾಹವಾಗುವಂತಿಲ್ಲ. ಒಂದೊಮ್ಮೆ ಈ ದೇಶಗಳಿಗೆ ಸೇರಿದ ಮಹಿಳೆಯನ್ನು ಮದುವೆಯಾಗಲು ಬಯಸಿದ್ರೆ ಅದಕ್ಕೆ ಸರ್ಕಾರದ ಅನುಮತಿ ಬೇಕಾಗುತ್ತದೆ.
ಈ ಅನುಮತಿ ಪಡೆಯಲು ಪುರುಷರು ಅರ್ಜಿಯನ್ನು ಸಲ್ಲಿಸಬೇಕು, ಅಗತ್ಯ ದಾಖಲೆಗಳನ್ನು ಕೊಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ಈಗನ ಲೆಕ್ಕಚಾರದ ಪ್ರಕಾರ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಹಾಗೂ ಮ್ಯಾನ್ಮಾರ್ ನ 5 ಲಕ್ಷ ಮಹಿಳೆಯರು ನೆಲೆಸಿದ್ದಾರೆ. ಆದರೆ ಸೌದಿ ಅರೇಬಿಯಾ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಹಾಗೂ ಮ್ಯಾನ್ಮಾರ್ ನ ಮಹಿಳೆಯರನ್ನು ಮದುವೆಯಾಗುವುದಕ್ಕೆ ನಿಷೇಧ ಹೇರಿದ್ದು ಯಾಕೆ ಅನ್ನುವುದು ಇನ್ನೂ ಗೊತ್ತಾಗಿಲ್ಲ.
Discussion about this post