ಬೆಂಗಳೂರು : ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಸುದ್ದಿ ಬಳಿಕ, ಅವರ ಇನ್ಸ್ಟಾ ಖಾತೆಯನ್ನು ತೆರೆದು ನೋಡಿದ್ರೆ, ಅದರಲ್ಲಿ ಗಮನ ಸೆಳೆದದ್ದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆಗೆ ತೆಗೆಸಿಕೊಂಡ ಫೋಟೋ.
ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಮುನ್ನ ರಾಜಕಾರಣಿಗಳ ಪುತ್ರರೊಂದಿಗೆ ಪಾರ್ಟಿ ನಡೆಸಿದ್ದರು ಎನ್ನಲಾಗಿದೆ ಎಂದು ಕೆಲ ಮಾಧ್ಯಮಗಳು ಸುದ್ದಿ ಮಾಡಿರುವ ಕಾರಣದಿಂದ ರಾಹುಲ್ ಗಾಂಧಿ ಜೊತೆಗೆ ತೆಗೆಸಿಕೊಂಡ ಫೋಟೋ ಮಹತ್ವ ಪಡೆದುಕೊಂಡಿದೆ.
https://www.instagram.com/p/BhTgXfXh_9y/
ಹಾಗಂತ ರಾಹುಲ್ ಗಾಂಧಿಯವರಿಗೆ ಮಾಂಡ್ರೆ ಪರಿಚಯವಿದೆ ಅಂದುಕೊಂಡ್ರೆ ತಪ್ಪಾಗುತ್ತದೆ. ತಮ್ಮ ರಾಜಕೀಯ ಜೀವನದಲ್ಲಿ ರಾಹುಲ್ ಗಾಂಧಿಯವರು ತಮ್ಮ ಅಭಿಮಾನಿಗಳು, ಕಾರ್ಯಕರ್ತರು, ನಾಯಕರೊಂದಿಗೆ ತೆಗೆಸಿಕೊಂಡ ಫೋಟೋಗೆ ಲೆಕ್ಕವಿಲ್ಲ. ಹೀಗಾಗಿ ಅದೇ ರೀತಿಯಲ್ಲಿ ಮಾಂಡ್ರೆ ರಾಹುಲ್ ಜೊತೆ ಫೋಟೋ ತೆಗೆಸಿಕೊಂಡಿರಬಹುದು.
ಇನ್ನು ಈ ಪೋಟೋ ಹಲವು ತಿಂಗಳ ಹಿಂದೆ ರಾಹುಲ್ ಗಾಂಧಿ ಪ್ರಭಾವಶಾಲಿ ಯುವ ನೇತಾರರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ತೆಗೆಸಿಕೊಂಡ ಫೋಟೋ. ಆ ಸಂದರ್ಭದಲ್ಲಿ ನಟಿ ರಮ್ಯ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು.
Discussion about this post