ಶಿವಮೊಗ್ಗ : ಕೊರೋನಾ ಮಹಾಮಾರಿಯ ಅಟ್ಟಹಾಸದ ಆಳ ಅಗಲವನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಹಿಂದೆಲ್ಲಾ ಗಂಭೀರ ಕಾಯಿಲೆಗಳಿದ್ರೆ ಮಾತ್ರ ಕೊರೋನಾ ಕಂಟಕ ಅನ್ನುತ್ತಿದ್ದರು. ಈಗ ಹಾಗಿಲ್ಲ ಆರೋಗ್ಯವಂತರು ಕೂಡಾ ಸೋಂಕಿಗೆ ಬಲಿಯಾಗುತ್ತಿದ್ದಾರೆ.
ಈ ನಡುವೆ ಮದುವೆಯಾದ ನಾಲ್ಕೇ ದಿನಕ್ಕೆ ನವವಿವಾಹಿತೆಯೊಬ್ಬಳು ಕೊರೋನಾ ಸೋಂಕಿಗೆ ಬಲಿಯಾಗಿರುವ ಘಟನೆ ಶಿವಮೊಗ್ಗದ ಹರಿಗೆಯಲ್ಲಿ ನಡೆದಿದೆ.
ಇದೇ ಸೋಮವಾರ ನಿದಿಗೆಯ ಪೂಜಾ (24) ಮತ್ತು ಹರಿಗೆಯ ಮಹೇಶ್ ವಿವಾಹ ಕಾರ್ಯ ನಡೆದಿತ್ತು. ಮದುವೆಯಾದ ಎರಡೇ ದಿನಕ್ಕೆ ಪೂಜಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಮೈಕೈ ನೋವು ಕಾಣಿಸಿಕೊಂಡ ವೇಳೆ ಮದುವೆಯ ಸಂದರ್ಭದಲ್ಲಿ ಓಡಾಟ ನಡೆಸಿ ಹೀಗಾಗಿರಬೇಕು ಎಂದು ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಗುರುವಾರ ಪೂಜಾ ಏಕಾಏಕಿ ಉಸಿರು ನಿಲ್ಲಿಸಿದ್ದಾರೆ.
ಬಳಿಕ ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇದೀಗ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
Discussion about this post