crossorigin="anonymous"> ಬೊಮ್ಮಾಯಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ಯಾಕೆ ಸಿದ್ದರಾಮಯ್ಯ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಬೊಮ್ಮಾಯಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ಯಾಕೆ ಸಿದ್ದರಾಮಯ್ಯ

Radhakrishna Anegundi by Radhakrishna Anegundi
15-10-21, 9 : 46 am
in ಟಾಪ್ ನ್ಯೂಸ್
siddaramaiah-basavaraj-bommai-engage-in-twitter-war-on-moral-policing
Share on FacebookShare on TwitterWhatsAppTelegram

ಬೆಂಗಳೂರು : ಮಾಜಿ ಹಾಗೂ ಹಾಲಿ ಸಿಎಂ ನಡುವೆ ಟ್ವೀಟ್ ವಾರ್ ಮುಂದುವರಿದಿದ್ದು, ಮೊನ್ನೆಯಷ್ಟೇ ಸಿದ್ದರಾಮಯ್ಯ ಅವರಿಗೆ ಖಡಕ್ಕ್ ಉತ್ತರ ಕೊಟ್ಟಿದ್ದರು. ಬೊಮ್ಮಾಯಿ ಕೊಟ್ಟಿದ್ದ ತಿರುಗೇಟು ಸಿಕ್ಕಾಪಟ್ಟೆ ವೈರಲ್ ಕೂಡಾ ಆಗಿತ್ತು. ಇದೀಗ ಈ ಟ್ವೀಟ್ ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಕಾನೂನು ಕ್ರಮ ಎಚ್ಚರಿಕೆ ನೀಡಿದ್ದಾರೆ.

ನೈತಿಕ ಪೊಲೀಸ್ ಗಿರಿ ಕುರಿತಂತೆ ಪ್ರತಿಕ್ರಿಯಿಸಿದ್ದ ಸಿಎಂ ಬೊಮ್ಮಾಯಿ,  ಕ್ರಿಯೆಗೆ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ ಅಂದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬೊಮ್ಮಾಯಿ, ಆಡಳಿತ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ನೀವು ಸಿಎಂ ಆಗಿದ್ದಾಗ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಮಾಡಿದ್ದಂತೆ ಹಿಂದೂ ಕಾರ್ಯಕರ್ತರನ್ನು ಸಾಯಿಸುವ ಮೂಲಕ ಹಿಂದೂ ವಿರೋಧಿಗಳ ‘ಐಕಾನ್’ ಆಗಿದ್ದೀರಿ. ಪೊಲೀಸ್ ಅಥವಾ ಆಡಳಿತ ಪಾಠವನ್ನು ನಾನು ನಿಮ್ಮಿಂದ ಕಲಿಯಬೇಕಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಮ್ಮಲ್ಲಿ ಸಮರ್ಥ ಪೊಲೀಸ್ ಪಡೆ ಇದೆ ಅಂದಿದ್ದರು.

ಜೊತೆಗೆ ನಿಮ್ಮ ಆಡಳಿತದಲ್ಲಿ ‘ಜಂಗಲ್ ರಾಜ್’ ನಿರ್ಮಾಣವಾಗಿತ್ತು. ಹಿಂದೂಗಳ ಹತ್ಯೆ ವೇಳೆ ನೀವು ಕುರುಡ, ಕಿವುಡ ಮತ್ತು ಮೂಕರಾಗಿದ್ದೀರಿ. ನನ್ನ ಆಡಳಿತದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ನಿಮ್ಮ ಜಂಗಲ್ ರಾಜ್‌ನಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು ಮತ್ತು ಅನೇಕ ಗಲಭೆಗಳು ನಡೆದವು ಎಂದು ಗಂಭೀರ ಆರೋಪ ಮಾಡಿದ್ದರು.

ಇದೀಗ ಇದೀಗ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವುದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ, ಮುಖ್ಯಮಂತ್ರಿಯವರು ಕಿರಿಯರಿರುವ ಕಾರಣದಿಂದ ತಿದ್ದಿಕೊಳ್ಳಲಿ ಎಂಬ ಕಾರಣಕ್ಕಾಗಿ ಪ್ರತಿಕ್ರಿಯೆಯನ್ನಷ್ಟೇ ನೀಡುತ್ತಿದ್ದೇನೆ ಅಂದಿದ್ದಾರೆ.

ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ.

ಇಂತಹ ಬೇಜವಾಬ್ದಾರಿ ಹೇಳಿಕೆಗಿಂತ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು.

ಈ ಆರೋಪಕ್ಕಾಗಿ ನಾನು ಕಾನೂನುಕ್ರಮಕ್ಕೆ ಮುಂದಾಗಬಹುದು.
ಕಿರಿಯರಿದ್ದೀರಿ ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ
2/9 pic.twitter.com/IYI0fXmodB

— Siddaramaiah (@siddaramaiah) October 14, 2021

ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ- ಗುಬ್ಬಕ್ಕನ ಕತೆ ಹೇಳುತ್ತಾ ಕೂರಬೇಡಿ. ನೀವು ಗೃಹ ಸಚಿವರಾಗಿದ್ದವರು, ಈಗ ಮುಖ್ಯಮಂತ್ರಿ ಆಗಿದ್ದೀರಿ. ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿಯನ್ನು ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯವನ್ನು ತಿಳಿಸಿ ಎಂದು ಆಗ್ರಹಿಸಿರುವ ಸಿದ್ದರಾಮಯ್ಯ , 2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾದ 10 ಹಿಂದೂಗಳ ಸಾವು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಸದಸ್ಯರಿಂದ ನಡೆದಿದೆ. 11 ಮುಸ್ಲಿಮರು ಮತ್ತು 10 ಹಿಂದೂಗಳ ಸಾವಿಗೆ ಬಜರಂಗ ದಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಕಾರಣ ಅಂದಿದ್ದಾರೆ.

.@BSBommai ಅವರೇ, ನೀವು ಗೃಹಸಚಿವರಾಗಿದ್ದವರು,
ಈಗ @CMofKarnataka ಆಗಿದ್ದೀರಿ.
ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ-ಗುಬ್ಬಕ್ಕ ಕತೆ ಹೇಳುತ್ತಾ ಕೂರಬೇಡಿ,

ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿ ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯ ತಿಳಿಸಿ.
3/9

. pic.twitter.com/OvHtGiVzEK

— Siddaramaiah (@siddaramaiah) October 14, 2021
Tags: siddaramaiah
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್