ಕನ್ನಡದ ಮಾಣಿಕ್ಯ, ಕಿಚ್ಚ ಸುದೀಪ್ ಹಿಂದೆ ಮಾಧ್ಯಮ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಗಂಭೀರವಾಗಿರುತ್ತಿದ್ದರು.
ಆದರೆ ಇದೀಗ ಸುದೀಪ್ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.
ಇತ್ತೀಚೆಗೆ ಸುವರ್ಣ ನ್ಯೂಸ್ ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸುದೀಪ್ ಪೈಲ್ವಾನ್ ಸಿನಿಮಾದ ಲಂಗೋಟಿ ವಿಚಾರದಲ್ಲಿ ಕುತೂಹಲಕಾರಿ ವಿಷಯಗಳನ್ನು ತೆರೆದಿಟ್ಟಿದ್ದಾರೆ.
ಸುದ್ದಿ ವಾಚಕ ಜಯಪ್ರಕಾಶ್ ಶೆಟ್ಟಿ ಲಂಗೋಟಿ ಡಿಸೈನರ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಲಂಗೋಟಿಗೂ ಡಿಸೈನರ್ ಇದ್ರು, ಆದರೆ ಅದನ್ನು ಹಾಕುವಾಗ ನಾನೊಬ್ಬನೇ ಇರುತ್ತಿದ್ದೆ ಅಂದಿದ್ದಾರೆ.
ಇನ್ನು ಬಿಗ್ ಬಾಸ್ ಕುರಿತ ಪ್ರತಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಸುದೀಪ್, ಬಿಗ್ ಬಾಸ್ ಕಾರ್ಯಕ್ರಮದ ಕ್ವಾಸ್ಟಿಮ್ ಕುರಿತಂತೆ ಮಾತನಾಡಿ ಎಲ್ಲಾ ಪ್ಯಾಂಟ್ ಗಳಿಗೂ ಜಿಪ್ ಹಿಂದೆ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
Discussion about this post