24ನೇ ತಾರೀಖು ” ದಿ ಸೌಂಡ್ ಆಫ್ ಕೆಯಾಸ್ ” ಅನ್ನೋ ಹೊಸ ಸೌಂಡಿಂಗ್ ಇರೋ,ರಘು ದೀಕ್ಷಿತ್ ಕಂಪೋಸ್ ಮಾಡಿ ಹಾಡಿರೋ, ವಾಸುಕಿ ವೈಭವ್ ಸಾಹಿತ್ಯ ಬರೆದಿರೋ ಲಿರಿಕಲ್ ವಿಡಿಯೋ ರಿಲೀಸ್ ಆಗ್ತಿದೆ.
ರಘು ದೀಕ್ಷಿತ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗಲಿದೆ.
ಈಗಾಗ್ಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರೋ ನಿನ್ನ ಸನಿಹಕೆ ಟೀಮ್ ಇದೀಗ ಇದೊಂದು ಪೋಸ್ಟರ್ ಬಿಟ್ಟು, ಇದು ಮಾಮೂಲಿ ಸಿನಿಮಾ ಅಲ್ಲ. ಇದ್ರಲ್ಲೇನೋ ಸ್ಪೆಷಲ್ ಇದೆ ಅನ್ನೋದನ್ನ ತೋರಿಸ್ತಿದೆ.
ಸೂರಜ್ ಗೌಡ ನಟಿಸಿ ನಿರ್ದೇಶಿಸಿರೋ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ.
ಸದ್ಯ ಸೆನ್ಸಾರ್ ಅಂಗಳದಲ್ಲಿರೋ ನಿನ್ನ ಸನಿಹಕೆ ಇಷ್ಟರಲ್ಲೇ ಟ್ರೈಲರ್ ರಿಲೀಸ್ ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡೋ ಯೋಚನೆಯಲ್ಲಿದೆ.
Discussion about this post