ಶ್ರೀನಗರ : ಭಾರತದ ಗಡಿಯಲ್ಲಿ ಪಾಕಿಸ್ತಾನ ಪೋಷಿತ ಉಗ್ರರ ಹಾವಳಿ ಹೆಚ್ಚಾಗಿದ್ದು, ಭಾರತದ ಯೋಧರು ಉಗ್ರರ ರುಂಡ ಚೆಂಡಾಡುತ್ತಿದ್ದರೂ ಮತ್ತೆ ಮತ್ತೆ ರಕ್ತ ಬೀಜಾಸುರರಂತೆ ಹುಟ್ಟುತ್ತಿದ್ದಾರೆ. ಆತಂಕ ಅಂದ್ರೆ ಭಾರತದಿಂದ ಎಜುಕೇಶನ್ ಸಲುವಾಗಿ ಪಾಕಿಸ್ತಾನಕ್ಕೆ ಹೋದವರು ಉಗ್ರ ತರಬೇತಿ ಪಡೆದು ಮರಳುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಪುಲ್ವಾಮಾ ದಾಳಿಯ ನೇತೃತ್ವ ವಹಿಸಿದ್ದ ಜೈಷ್ -ಎ-ಮೊಹಮ್ಮದ್ ಸಂಘಟನೆಯ ಉಗ್ರ ಅಬು ಸೈಫುಲ್ಲಾ ಅಲಿಯಾಸ್ ಲಂಬೂನನ್ನು ಹೊಡೆದುರುಳಿಸಲಾಗಿತ್ತು.
ಈ ನಡುವೆ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದು, ಇವರನ್ನೂ ಶೀಘ್ರದಲ್ಲೇ ಹೊಡೆದುರುಳಿಸುವ ಎಚ್ಚರಿಕೆ ನೀಡಲಾಗಿದೆ.
ಕಾಶ್ಮೀರ ಜೋನ್ ಪೊಲೀಸರು ಟ್ವಿಟ್ಟರ್ನಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ 7 ಮಂದಿ ಹಳೆ ಮುಖಗಳಾದ್ರೆ ಮೂರು ಮಂದಿ ಹೊಸದಾಗಿ ಜೈಷ್ -ಎ-ಮೊಹಮ್ಮದ್ ಸಂಘಟನೆ ಸೇರಿದವರಾಗಿದ್ದಾರೆ. ಪಟ್ಟಿಯ ಪ್ರಕಾರ ಸಲೀಂ ಪರಾಯ್, ಯೂಸುಫ್ ಕಂಟ್ರೂ, ಅಬ್ಬಾಸ್ ಶೇಖ್, ರಿಯಾಜ್ ಶಟರ್ಗುಂಡ್, ಫರೂಖ್ ನಲಿ, ಜುಬೇರ್ ವಾನಿ, ಅಶ್ರಫ್ ಮೌಲ್ವಿ, ಸಾಕಿದ್ ಮಂಜೂರ್, ಉಮರ್ ಮುಸ್ತಖ್ ಖಂಡೆ, ವಕೀಲ್ ಶಾ ದೇಶಕ್ಕೆ ಬೇಕಾದ ಉಗ್ರಗಾಮಿಗಳಾಗಿದ್ದಾರೆ.
Discussion about this post