crossorigin="anonymous"> ಕೊರೋನಾ ಮುಕ್ತವಾಗಿ ಬಿಡುತ್ತಾ ಇಸ್ರೇಲ್..ಮಿತ್ರ ರಾಷ್ಟ್ರದಿಂದ ಭಾರತ ಕಲಿಯಬೇಕಾಗಿರುವುದೇನು...? - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕೊರೋನಾ ಮುಕ್ತವಾಗಿ ಬಿಡುತ್ತಾ ಇಸ್ರೇಲ್..ಮಿತ್ರ ರಾಷ್ಟ್ರದಿಂದ ಭಾರತ ಕಲಿಯಬೇಕಾಗಿರುವುದೇನು…?

Radhakrishna Anegundi by Radhakrishna Anegundi
29-04-21, 7 : 22 pm
in ವಿದೇಶ
isrel
Share on FacebookShare on TwitterWhatsAppTelegram

ನವದೆಹಲಿ : ಅಮೆರಿಕಾದಲ್ಲಿ ಕೊರೋನಾ ಲಸಿಕಾ ಕಾರ್ಯಕ್ರಮ ಫಲ ನೀಡಿದ್ದು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಹಾಕದೆ ಬೀದಿ ಸುತ್ತಬಹುದಾಗಿದೆ. ಈ ನಡುವೆ ವಿಶ್ವದ ಮತ್ತೊಂದು ರಾಷ್ಟ್ರ ಕೊರೋನಾ ಮುಕ್ತವಾಗುವತ್ತ ಹೆಜ್ಜೆ ಹಾಕುತ್ತಿದೆ. ಅದುವೇ ಭಾರತದ ಪರಮಮಿತ್ರ ಇಸ್ರೇಲ್. ಇನ್ನೊಂದಿಷ್ಟು ವಾರ ಕಳೆದರೆ ಇಸ್ರೇಲ್ ಕೊರೋನಾ ಸೋಲಿಸುವುದು ಖಚಿತ.

ಹಾಗಾದರೆ ಇಸ್ರೇಲ್ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯಭೇರಿ ಬಾರಿಸಿದ್ದು ಹೇಗೆ ಅಂದ್ರೆ ಅದು ಸಖತ್ ಕುತೂಹಲಕಾರಿ ವಿಷಯ. ದೇಶದಲ್ಲಿ ಕೊರೋನಾ ಸೋಂಕು ಕಾಲಿಡುತ್ತಿದ್ದಂತೆ ಎಚ್ಚೆತುಕೊಂಡ ಇಸ್ರೇಲ್ ಶರವೇಗದಲ್ಲಿ ಟೆಸ್ಟಿಂಗ್ ಕಾರ್ಯ ಪ್ರಾರಂಭಿಸಿತ್ತು. ಯಾರಿಗೆಲ್ಲಾ ಪಾಸಿಟಿವ್ ಬರುತ್ತದೋ ಅವರ ಸಂಪರ್ಕಕ್ಕೆ ಬಂದವರನ್ನು ಟ್ರೇಸ್ ಮಾಡಲಾಗುತ್ತಿತ್ತು, ಜೊತೆಗೆ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿತ್ತು.

ಇದೇ ಕಾರಣಕ್ಕಾಗಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8 ಲಕ್ಷದ ಗಡಿ ದಾಟಿದರೂ ಸಾವಿನ ಸಂಖ್ಯೆ 6 ಸಾವಿರದ ಅಸುಪಾಸಿನಲ್ಲಿತ್ತು. ಇನ್ನು ಇಸ್ರೇಲ್ ಡಿಸೆಂಬರ್ ನಲ್ಲಿ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಸಂಪೂರ್ಣ ಡಿಜಿಟಲ್ ವ್ಯವಸ್ಥಯಲ್ಲೇ ಲಸಿಕೆ ವಿತರಣೆ ಕಾರ್ಯ ನಡೆದಿದ್ದು, ಈಗಾಗಲೇ 90 ಲಕ್ಷ ಜನಸಂಖ್ಯೆಯ ಪೈಕಿ 60 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಜೊತೆಗೆ 10 ಲಕ್ಷ ಮಂದಿಯಲ್ಲಿ ಸ್ವಾಭಾವಿಕವಾಗಿಯೇ ಹರ್ಡ್ ಇಮ್ಯೂನಿಟಿ ಬಂದಿದೆ ಎನ್ನಲಾಗಿದೆ. ಹೀಗಾಗಿ 70 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳಿಲ್ಲವಂತೆ.  ಈ ಕಾರಣದಿಂದಲೇ ಇಸ್ರೇಲ್ ನಲ್ಲಿ ಮಾಸ್ಕ್ ಕಿತ್ತು ಬಿಸಾಕುವ ಕೆಲಸ ಪ್ರಾರಂಭವಾಗಿದೆ.

Masking in our glory, because masks are no longer required outdoors in #Israel! pic.twitter.com/8bfvuy5oyS

— Israel ישראל 🇮🇱 (@Israel) April 19, 2021

ಇನ್ನು ಕೊರೋನಾ ಲಸಿಕೆಯ ಎರಡು ಡೋಸ್ ಪಡೆದವರಿಗೆ ಗ್ರೀನ್ ಪಾಸ್ ನೀಡಲಾಗುತ್ತಿದ್ದು, ಈ ಪಾಸ್ ಪಡೆದವರು, ಹೋಟೆಲ್, ರೆಸ್ಟೋರೆಂಟ್, ಬೀಚ್, ಪಾರ್ಟಿ, ಪಬ್ ಗಳಿಗೆ ಸುತ್ತಾಡಬಹುದಾಗಿದೆ. ಹಾಗಂತ ಜನರಲ್ಲಿ ಆತಂಕ ದೂರವಾಗಿಲ್ಲ. ಎರಡು ಡೋಸ್ ಪಡೆದವರೂ ಗ್ರೀನ್ ಪಾಸ್ ಪಡೆದವರು ಮಾಸ್ಕ್ ಹಾಕಿಯೇ ಓಡಾಡುತ್ತಿದ್ದಾರೆ. ಕೆಲವರಿಗೆ ಇದು ಅಭ್ಯಾಸವಾಗಿ ಹೋಗಿದ್ರೆ, ಮತ್ತೆ ಕೆಲವರಿಗೆ ಭಯವೇ ಕಾರಣವಾಗಿದೆ.

ಆದರೆ ಇಸ್ರೇಲ್ ನ ಆತ್ಮೀಯ ರಾಷ್ಟ್ರವಾದ ಭಾರತದಲ್ಲಿ ಏನಾಗುತ್ತಿದೆ. ಇಸ್ರೇಲ್ ಪುಟ್ಟ ರಾಷ್ಟ್ರ, ಭಾರತ ದೊಡ್ಡ ರಾಷ್ಟ್ರ ಅನ್ನುವ ವಾದವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಪರಮಮಿತ್ರ ರಾಷ್ಟ್ರದಿಂದ ಭಾರತ ಕಲಿಯೋದು ಸಾಕಷ್ಟಿದೆ.

🇮🇱✌️https://t.co/w2eDBOQFfL

— Benjamin Netanyahu – בנימין נתניהו (@netanyahu) April 25, 2021

ಕನಿಷ್ಟ ಪಕ್ಷ ಕೊರೋನಾ ಲಸಿಕೆಯನ್ನು ಹೆಚ್ಚು ಜನ ಪಡೆಯುವಂತೆ ಮಾಡಬೇಕು. ಇದಕ್ಕಾಗಿ ಕಡ್ಡಾಯ ಲಸಿಕೆಯ ಬದಲಾಗಿ ಪರ್ಯಾಯ ಮಾರ್ಗಗಳನ್ನು ಸರ್ಕಾರ ಯೋಚಿಸಬೇಕಾಗಿದೆ. ಜೊತೆಗೆ ಲಸಿಕೆ ಹಾಕಲು ಬರೋ ಮಂದಿ ಲಸಿಕೆ ಸ್ಟಾಕ್ ಇಲ್ಲ ಅನ್ನುವ ಕಾರಣಕ್ಕಾಗಿ ಆರೋಗ್ಯ ಕೇಂದ್ರಗಳಿಂದ ವಾಪಾಸ್ ಹೋಗುವಂತಾಗಬಾರದು.

Tags: ಇಸ್ರೇಲ್ಕೊರೋನಾಗ್ರೀನ್ ಪಾಸ್
Share1TweetSendShare

Discussion about this post

Related News

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ವಲಸಿಗ V/S ಬ್ರಿಟಿಷರ ನಡುವೆ ಸಂಘರ್ಷ : ಬ್ರಿಟನ್ ನಲ್ಲಿ ಹಿಂಸಾಚಾರ

ಕ್ಯೂಬಾದಲ್ಲಿ Cuba ಪೆಟ್ರೋಲ್ ದರ 456 ರೂಪಾಯಿಗೆ ಏರಿಕೆ

ಬತ್ತಿ ಹೋಗುತ್ತಿದೆ ಅಮೆಜಾನ್ ನದಿ : ಜಗತ್ತಿನ ಅಂತ್ಯಕ್ಕೆ ಸಿಕ್ತು ಮತ್ತೊಂದು ಮುನ್ಸೂಚನೆ

Warships In Karachi: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ಯುದ್ಧ ನೌಕೆ

Joe Biden Visit Israel : ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಾಳೆ ಇಸ್ರೇಲ್‌ಗೆ

facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…?

Indian American : ಅಮೆರಿಕಾದ ನೆಲದಲ್ಲಿ ಅವಮಾನ : ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು

mexico modi : ಯುದ್ದ ತಡೆಯಲು ಮೋದಿ ನೇತೃತ್ವದಲ್ಲಿ ಸಮಿತಿ ರಚಿಸಿ : ಮೆಕ್ಸಿಕೋ ಆಗ್ರಹ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್