1946-1984 ನಡುವಿನ ಕಾಲಘಟ್ಟದ ಭೂಗತಲೋಕದ ಕಥೆಯನ್ನು ಒಳಗೊಂಡ ‘ಕಬ್ಜ’ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ.
ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ಅನೂಪ್ ರೇವಣ್ಣ, ಕಾಮರಾಜ್ ಸೇರಿ ದೊಡ್ಡ ತಾರಾಬಳಗವಿದೆ. ಜೊತೆಗೆ ಸುದೀಪ್ ಅವರು ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ ಕಬ್ಜ ಚಿತ್ರದಲ್ಲಿನ ಉಪೇಂದ್ರ ಅವರ ಲುಕ್ ಬಹಿರಂಗವಾಗಿತ್ತು, ಆದರೆ ಕಿಚ್ಚ ಸುದೀಪ್ ಅವರ ಲುಕ್ ಹೇಗಿರಬಹುದು ಅನ್ನುವ ಕುತೂಹಲ ತಣಿದಿರಲಿಲ್ಲ. ಇದೀಗ ಕಬ್ಜ ಚಿತ್ರದ ಕಾಂಬೋ ಪೋಸ್ಟರ್ ಇಂದು ಬಿಡುಗಡೆಯಾಗಿದ್ದು, ಕಿಚ್ಚ ಖಡಕ್ ಲುಕ್ ನಲ್ಲಿ ಇರ್ತಾರೆ ಅನ್ನುವುದು ಗೊತ್ತಾಗಿದೆ.

ಈ ಚಿತ್ರದಲ್ಲಿ ಭಾರ್ಗವ್ ಬಕ್ಷಿ ಅನ್ನೋ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.
Discussion about this post