ಬೆಂಗಳೂರು : ಹಳೆಯ ಡ್ರಗ್ಸ್ ಆರೋಪಿಯೊಬ್ಬ ನೀಡಿದ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದೊಡ್ಡ ದೊಡ್ಡ ಕುಳಗಳನ್ನು ಬಲೆಗೆ ಕೆಡವಿದ್ದಾರೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತನಿಖೆ ನಡೆದರೆ ಮತ್ತಷ್ಟು ಸೆಲೆಬ್ರೆಟಿಗಳು ದಂಧೆಕೋರರು ಅನ್ನುವುದು ಬಯಲಾಗಲಿದೆ.
ಈ ನಡುವೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸೋನಿಯಾ ಅಗರ್ ವಾಲ್ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಹುಟ್ಟಿದೆ. ಬೆಳ್ಳಗೆ ಸೋನಿಯಾ ಅಗರ್ ವಾಲ್ ಮನೆಗೆ ದಾಳಿ ಅಂದ ತಕ್ಷಣ ಬಹುಭಾಷಾ ನಟಿಯೊಬ್ಬರ ಫೋಟೋ ಗೂಗಲ್ ನಲ್ಲಿ ಸರ್ಚ್ ಆಗಿತ್ತು. ಆದರೆ ಬಳಿಕ ಗೊತ್ತಾಗಿದ್ದು ಈ ಅಗರ್ ವಾಲ್ ಅವರಲ್ಲ ಎಂದು.
ಬೆಂಗಳೂರಿನಲ್ಲಿ ಸೆಲೆಬ್ರೆಟಿ ಬ್ಯೂಟಿಷಿಯನ್ ಆಗಿರುವ ಸೋನಿಯಾ ಅಗರ್ ವಾಲ್, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರಂತೆ, ಜೊತೆಗೆ ಕಾಸ್ಮೆಟಿಕ್ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ. ಸಾವಯವ ಉತ್ಪನ್ನ ಮಾರಾಟ ಅಂದ ಮೇಲೆ ಆಕೆಯ ಗಿರಾಕಿಗಳು ಹೇಗಿರುತ್ತಾರೆ ಅನ್ನುವುದನ್ನು ಊಹಿಸಬಹುದು.

ಈ ನಡುವೆ ಬ್ಯೂಟಿಷಿಯನ್ ಆಗಿರುವ ಈಕೆಗೆ ಸಾಕಷ್ಟು ಸೆಲೆಬ್ರೆಟಿಗಳ ಸಂಪರ್ಕವಿದ್ದು, ಅದರಲ್ಲಿ ಬಹುತೇಕ ಮಂದಿ ಸಿನಿಮಾ ಹಾಗೂ ಧಾರಾವಾಹಿಯ ನಟ ಹಾಗೂ ನಟಿಯರು ಎನ್ನಲಾಗಿದೆ. ಥಾಮಸ್ ನಿಂದ ಡ್ರಗ್ಸ್ ಪಡೆಯುತ್ತಿದ್ದ ಈಕೆ ಈ ಹಿರಿ ಮತ್ತು ಕಿರುತೆರೆ ಮಂದಿಗೆ ಮಾಲು ಪೂರೈಸುತ್ತಿದ್ದಳು ಎನ್ನಲಾಗಿದೆ.
ಜೊತೆಗೆ ಸೀರಿಯಲ್ ನಿಂದ ಸಿನಿಮಾಗೆ ಬರುವವರನ್ನೇ ಫ್ರೆಂಡ್ಸ್ ಮಾಡಿಕೊಳ್ಳುತ್ತಿದ್ದ ಈಕೆ ಸ್ಯಾಂಡಲ್ ವುಡ್ ನಲ್ಲಿ ಲೈಫ್ ಲೀಡ್ ಮಾಡೋ ಬಗ್ಗೆ ಐಡಿಯಾ ಕೊಡ್ತಾ ಇದ್ಲಂತೆ.
Drug peddling: Celebrity, DJ & industrialist taken into custody in K’taka
Discussion about this post