ಬೆಂಗಳೂರು : ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೊಡುತ್ತಿರುವ ಎಚ್ಚರಿಕೆಗಳು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.
ಇದೀಗ ಕೊರೋನಾ ವೈರಸ್ ಮೂಲವನ್ನು ಹುಡುಕಲು ಹೊರಟಿರುವ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಗೋಮಾಂಸದಿಂದ ಕೊರೋನಾ ಹುಟ್ಟಿದೆ ಎಂದು ಶಂಕಿಸಿದ್ದಾರೆ.
ಕೊರೋನಾ ವೈರಸ್ ಹುಟ್ಟಿದ್ದು ಎಲ್ಲಿ, ಚೀನಾದ ವುಹಾನ್ ಲ್ಯಾಬ್ ನಿಂದ ಅದು ಸೋರಿಕೆಯಾಯ್ತೇ ಅನ್ನುವ ಕುರಿತಂತೆ ತನಿಖೆ ನಡೆಸಲು ಹೋದ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು, ಚೀನಾಗೆ ಕ್ಲೀನ್ ಚಿಟ್ ಕೊಡುವ ಲಕ್ಷಣಗಳು ಗೋಚರಿಸುತ್ತಿದೆ.
ಕೊರೋನಾ ವೈರಸ್ ಮೂಲ ಚೀನಾದ ವುಹಾನ್ ಅಲ್ಲ, ಅದು ಗೋಮಾಂಸದಿಂದ ಹುಟ್ಟಿದೆ ಅನ್ನುವುದು ತಜ್ಞರ ವಾದ.
ಹಾಗಾದ್ರೆ ಗೋಮಾಂಸ ತಿಂದ್ರೆ ಕೊರೋನಾ ಬರುತ್ತದೆಯೇ, ಒಂದು ವೇಳೆ ತಿನ್ನಲೇಬೇಕು ಅನ್ನುವುದಾದರೆ ಎಷ್ಟು ಬಿಸಿಯಲ್ಲಿ ಬೇಯಿಸಬೇಕು. ಆಹಾರ ಬೇಯಿಸಿದಾಗ ಕೊರೋನಾ ವೈರಸ್ ಸಾಯುತ್ತದೆಯೇ ಅನ್ನುವ ಹಲವು ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
ಒಟ್ಟಿನಲ್ಲಿ ಗೋಮಾಂಸ ಪ್ರಿಯರಿಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ವರದಿ ಮಾತ್ರ ಶಾಕ್ ಕೊಡಲಿದೆ.
Discussion about this post