ನವದೆಹಲಿ : ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾ ಮಹಾಮಾರಿ. ತವರೂರು ಚೈನಾ ಅನ್ನುವ ವಾದವನ್ನು ಅನೇಕ ತಜ್ಞರು ಮುಂದಿಟ್ಟಿದ್ದಾರೆ. ಆದರೆ ಕೊರೋನಾ ವೈರಸ್ ಮೂಲ ಚೈನಾ ಅನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಡ್ರ್ಯಾಗನ್ ರಾಷ್ಟ್ರ ಹೇಳಿತ್ತು.
ಆದರೆ ಇದೀಗ ಅಮೆರಿಕಾದ ಗುಪ್ತಚರ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ವರದಿಯೊಂದನ್ನು ಪ್ರಕಟಿಸಿದ್ದು, ಚೀನಾ ಕೊರೋನಾ ಬಗ್ಗೆ ಜಗತ್ತಿಗೆ ತಿಳಿಸುವ ಮೊದಲೇ ವುಹಾನ್ ವೈರಾಣು ಪ್ರಯೋಗಾಲಯದ ಮೂವರು ಸಂಶೋಧಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಈ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ನೋಡಿದರೆ ಚೀನಾದ ಲ್ಯಾಬ್ ನಿಂದಲೇ ವೈರಸ್ ಲೀಕ್ ಆಗಿದೆ ಅನ್ನುವ ಈ ಹಿಂದಿನ ಆರೋಪಗಳಿಗೆ ಪುಷ್ಟಿ ಸಿಕ್ಕಿದೆ. ಇದಕ್ಕೆ ಸಾಕ್ಷಿ ಅಂದ್ರೆ WHO ತಂಡದ ತನಿಖೆ ವೇಳೆ ವುಹಾನ್ ಲ್ಯಾಬ್ ಪ್ರವೇಶಿಸಲು ಚೀನಾ ಅವಕಾಶ ನೀಡಿರಲಿಲ್ಲ. ಬದಲಿಗೆ ವೈರಸ್ ಮೊದಲಿಗೆ ಕಾಣಿಸಿಕೊಂಡಿತು ಎಂದು ಹೇಳಲಾದ ಹಸಿ ಮಾಂಸದ ಮಾರುಕಟ್ಟೆಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಿತ್ತು.
ಈ ವರದಿಯಿಂದ ಚೀನಾ ಮಾತ್ರವಲ್ಲ WHO ಮೇಲೂ ಅನುಮಾನ ಬರುತ್ತಿದೆ. ವೈರಸ್ ಮೂಲದ ಕುರಿತು 2020ರ ಡಿಸೆಂಬರ್ ನಲ್ಲಿ ವುಹಾನ್ ಗೆ ಭೇಟಿ ಕೊಟ್ಟಿದ್ದ WHO ಟೀಂ, ಪ್ರಯೋಗಲಾಯದಿಂದ ವೈರಸ್ ಸೋರಿಕೆಯಾಗಿಲ್ಲ ಎಂದು ಹೇಳಿ ಚೀನಾದ ಬೆನ್ನಿಗೆ ನಿಂತಿತ್ತು.
Discussion about this post