ಬೆಂಗಳೂರು : ಝೋಮ್ಯಾಟೋ ಡೆಲಿವರಿ ಬಾಯ್ ನನ್ನ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಿದ್ದ ಯುವತಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಾಮರಾಜ್ ನೀಡಿದ ದೂರಿನಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಈ ಹಿಂದೆ ಯುವತಿ ನೀಡಿದ ದೂರಿನಂತೆ ಡೆಲಿವರಿ ಬಾಯ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಯುವಕನನ್ನು ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು.

ಇದಾದ ಬಳಿಕ ಅಸಲಿ ಕಥೆ ಹೊರ ಬಿತ್ತೋ ಯುವತಿ ಪರ ಅನುಕಂಪ ತೋರಿದವರೆಲ್ಲ ಸೈಲೆಂಟ್ ಆದರು. ಕಾಮರಾಜ್ ಪರ ಜನ ಎದ್ದು ನಿಂತರು. ಬಾಲಿವುಡ್ ಸೆಲೆಬ್ರೆಟಿಗಳು ಕೂಡಾ ಡೆಲಿವರಿ ಹುಡುಗನ ಪರ ನಿಂತರು.
Discussion about this post